ಬೆಂಗಳೂರು: ಎಂತಹದ್ದೇ ಮಸಾಲೆ ಊಟ ತಿಂದರೂ ಕೊನೆಗೊಂದಿಷ್ಟು ಮೊಸರನ್ನ ತಿನ್ನೋದು ನಮ್ಮ ಸಂಪ್ರದಾಯ. ಮೊಸರನ್ನ ತಿಂದರೆ ಸಿಗುವ ತೃಪ್ತಿ ಇನ್ಯಾವುದರಲ್ಲೂ ಸಿಗದು.ಅಷ್ಟಕ್ಕೂ ಈ ಮೊಸರನ್ನ ತಿನ್ನುವುದರಿಂದ ನಮ್ಮ ಆರೋಗ್ಯಕ್ಕೆ ಎಷ್ಟು ಲಾಭವಿದೆ ಗೊತ್ತಾ? ಮೊಸರಿನಲ್ಲಿರುವ ಅಮಿನೊ ಆಸಿಡ್ ಇದನ್ನು ಒಂದು ಸಂತೃಪ್ತ ಆಹಾರವಾಗಿ ಮಾಡುತ್ತದೆ. ಹೀಗಾಗಿ ಇದನ್ನು ಸೇವಿಸಿದರೆ ನಮ್ಮ ಉದರ ದೇವರು ತೃಪ್ತನಾಗುತ್ತಾನೆ.ಇನ್ನು ಅಸಿಡಿಟಿ ಸಮಸ್ಯೆ ಇರುವವರಿಗೆ ಇದು ಹೇಳಿ ಮಾಡಿಸಿದ ಆಹಾರ. ಅಷ್ಟೇ ಅಲ್ಲ, ಊಟವಾದ ಮೇಲೆ