ಬೆಂಗಳೂರು: ಮನೆಗೆ ತಂದ ಸಾಮಾನು ವಸ್ತುಗಳನ್ನು ಹಾಳಾಗದಂತೆ ಸಂರಕ್ಷಿಸಿಡಲು ಬಳಸುವ ಯಂತ್ರವೆಂದರೆ ಫ್ರಿಡ್ಜ್. ಆದರೆ ಎಲ್ಲಾ ವಸ್ತುಗಳನ್ನು ಫ್ರಿಡ್ಜ್ ನಲ್ಲಿಡುವುದೂ ಒಳ್ಳೆಯದಲ್ಲ. ಅವು ಯಾವುವು ನೋಡೋಣ.ಕಾಫಿ ಕಾಫಿ ಪೌಡರ್ ತಂದಿದ್ದು ಹೆಚ್ಚಾಯ್ತೆಂದು ಫ್ರಿಡ್ಜ್ ನಲ್ಲಿಡಬೇಡಿ. ಕಾಫಿ ಪೌಡರ್ ಒಣ, ಬೆಚ್ಚಗಿನ ಪರಿಸರದಲ್ಲಿ ಸಂರಕ್ಷಿಸಿಟ್ಟರೇ ಹೆಚ್ಚು ಸಮಯ ಉಳಿಯುವುದು.ಬ್ರೆಡ್ ಬ್ರೆಡ್ ಬೇಗನೇ ಹಾಳಾಗುತ್ತದೆ. ಆದರೆ ಇದನ್ನು ತಂಪಾದ ವಾತಾವರಣದಲ್ಲಿಟ್ಟರೆ ಮತ್ತಷ್ಟು ಒಣಗಿ, ತಿನ್ನಲು ಸಾಧ್ಯವಾಗದು.ಟೊಮೆಟೊ ಸಾಮಾನ್ಯವಾಗಿ ನಾವೆಲ್ಲರೂ ಈ ತಪ್ಪು ಮಾಡುತ್ತೇವೆ.