ಬೆಂಗಳೂರು : ನಿಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಲು ಈ ಟೀ ಕುಡಿಯಿರಿ. ಇದರಿಂದ ಕೆಮ್ಮು, ಶೀತ, ಜ್ವರ ಹೀಗೆ ಹಲವು ರೋಗಗಳು ಬರದಂತೆ ತಡೆಗಟ್ಟುತ್ತದೆ. ಈ ಟೀ ಮಾಡುವುದು ಹೇಗೆಂದು ನೋಡೋಣ. ಒಂದು ಪಾತ್ರೆಯಲ್ಲಿ 150ml ನಷ್ಟು ನೀರನ್ನು ತೆಗೆದುಕೊಂಡು ಚೆನ್ನಾಗಿ ಕುದಿಸಿ. ನಂತರ ಅದಕ್ಕೆ 5-6 ಬೆಳ್ಳುಳ್ಳಿ ಎಸಳನ್ನು ಜಜ್ಜಿ ಹಾಕಿ ಅದರ ಜೊತೆಗೆ 1 ಇಂಚು ಹಸಿ ಶುಂಠಿ ಜಜ್ಜಿ ಹಾಕಿ 8-10 ನಿಮಿಷ ಕುದಿಸಿ.