ಬಾದಾಮಿ ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಬಾದಾಮಿ ಬುದ್ದಿ ಚುರುಕುಗೊಳಿಸುತ್ತದೆ. ಆದ್ರೆ ಬಾದಾಮಿ ಸೇವನೆ ಮಾಡುವ ಮೊದಲು ಸೇವನೆ ವಿಧಾನ ತಿಳಿದಿದ್ದರೆ ಒಳ್ಳೆಯದು. ಕೆಲವರು ಬಾದಾಮಿಯನ್ನು ಸಿಪ್ಪೆ ಸಮೇತ ತಿಂದ್ರೆ ಒಳ್ಳೆಯದು ಎನ್ನುತ್ತಾರೆ. ಮತ್ತೆ ಕೆಲವರು ಬಾದಾಮಿಯನ್ನು ನೆನೆಹಾಕಿ ಸಿಪ್ಪೆ ತೆಗೆದು ಸೇವನೆ ಮಾಡಬೇಕು ಎನ್ನುತ್ತಾರೆ. ಬಾದಾಮಿಯಲ್ಲಿ ಸಾಕಷ್ಟು ವಿಟಮಿನ್ ಹಾಗೂ ಮಿನರಲ್ಸ್ ಇರುತ್ತದೆ. ವಿಟಮಿನ್ ಇ, ಕ್ಯಾಲ್ಸಿಯಂ, ಮ್ಯಾಗ್ನಿಶಿಯಮ್, ಒಮೆಗಾ-3 ಕೊಬ್ಬಿನಾಮ್ಲ ಇದ್ರಲ್ಲಿರುತ್ತದೆ. ಬಾದಾಮಿ ಸಿಪ್ಪೆಯಲ್ಲಿ ಟ್ಯಾನಿಕ್ ಎಂಬ ಕಿಣ್ವಗಳಿರುತ್ತದೆ.