ಬೆಂಗಳೂರು : ಉಗುರುಗಳು ಕೈಗಳ ಅಂದವನ್ನು ಹೆಚ್ಚಿಸುತ್ತದೆ. ಆದರೆ ಕೆಲವರಿಗೆ ಉಗುರುಗಳು ಸರಿಯಾಗಿ ಬೆಳೆಯುವುದಿಲ್ಲ. ಅಂತವರಿಗೆ ಉಗುರುಗಳು ಅಂದವಾಗಿ, ಉದ್ದವಾಗಿ ಬೆಳೆಯಬೇಕೆಂದರೆ ಇದನ್ನು ಸೇವಿಸಿ. ಸಾಲ್ಮನ್ : ಇದರಲ್ಲಿ ವಿಟಮಿನ್ ಡಿ, ಪ್ರೋಟಿನ್ ಗಳು ಅಧಿಕವಾಗಿರುತ್ತದೆ. ಈ ಪ್ರೋಟಿನ್ ಗಳು ಕೊಲಾಜನ್ ಉತ್ಪತ್ತಿ ಮಾಡುತ್ತದೆ. ಇದು ಉಗುರು ಹಾಗೂ ಕೂದಲು ಬೆಳವಣೆಗೆಗೆ ಸಹಕಾರಿ. *ಕೋಳಿ ಮೊಟ್ಟೆ : ಮೊಟ್ಟೆಗಳಲ್ಲಿ ಬಯೋಟಿನ್ ಅಧಿಕವಾಗಿರುತ್ತದೆ. ಇದು ಕೂದಲು, ಉಗುರುಗಳ ಬೆಳವಣಿಗೆಯನ್ನು ಪ್ರೋತ್ಸಾಹಿಸುತ್ತದೆ.