ಬೆಂಗಳೂರು: ಸೆಕೆ ಆರಂಭವಾಗಿಯೇ ಬಿಟ್ಟಿದೆ. ನೀರಿನಂಶ ಧಾರಾಳವಾಗಿ ಇರುವ, ದೇಹವನ್ನು ಸದಾ ತಂಪಾಗಿ ಇಡುವ ಕರಬೂಜ ಹಣ್ಣಿನ ಜ್ಯೂಸ್ ಬಾಯಾರಿಕೆ ನೀಗಿಸುವುದರ ಜತೆಗೆ ದೇಹಕ್ಕೂ ಬಲು ಉತ್ತಮ. ಕರಬೂಜ ಹಣ್ಣಿನಿಂದ ಇನ್ನೂ ಹಲವಾರು ಪ್ರಯೋಜನಗಳು ಇವೆ. ಅವುಗಳಲ್ಲಿ ಕೆಲವೊಂದನ್ನು ಇಲ್ಲಿ ತಿಳಿಸಲಾಗಿದೆ.*ಕರಬೂಜ ಹಣ್ಣು ಅಧಿಕ ಪ್ರಮಾಣದ ಎ ಜೀವಸತ್ವ ಅಧಿಕವಿರುವುದರಿಂದ ಕಣ್ಣಿನ ದೋಷಗಳು ಹಾಗೂ ಇರುಳುಗಣ್ಣುಗಳಿಂದ ಬಾಧೆ ಪಡುತ್ತಿರುವವರು ಇದನ್ನು ಹೆಚ್ಚಾಗಿ ಸೇವಿಸಬೇಕು.*ಆ್ಯಸಿಡಿಟಿ ಇರುವವರಿಗೂ ಕರಬೂಜ ಹಣ್ಣು ಒಂದು ಅಮೃತದಂತೆ.