ಬಣ್ಣದಿಂದಲೇ ಹೆಸರು ಪಡೆದುಕೊಂಡ ಹಣ್ಣು ಕಿತ್ತಳೆ. ತನ್ನೊಳಗಿನ 8 - 10 ರಸಭರಿತ ತೊಳೆಗಳ ಸಮಾಗಮದಿಂದ ಸ್ವಲ್ಪ ಸಿಹಿ ಸ್ವಲ್ಪ ಹುಳಿ ಮಿಶ್ರಣಗೊಂಡ ಚಳಿಗಾಲದ ಹಣ್ಣಾಗಿ ಕಿತ್ತಳೆ ಎಲ್ಲರ ಕಣ್ಮನ ತಂಪಾಗಿಸುತ್ತದೆ. ತನ್ನಲ್ಲಿ ಬಗೆ ಬಗೆಯ ವಿಟಮಿನ್ ಗಳು, ಫೈಬರ್ ಅಂಶ ಮತ್ತು ಖನಿಜದ ಅಂಶಗಳನ್ನು ಒಳಗೊಂಡು ಮನುಷ್ಯನ ಆರೋಗ್ಯದ ವೃದ್ಧಿಗೆ ತನ್ನದೇ ಆದ ವಿಶೇಷವಾದ ನಂಟು ಹೊಂದಿದೆ. ಮನುಷ್ಯನು ಸೇವಿಸುವ ಎಲ್ಲ ಬಗೆಯ ಹಣ್ಣುಗಳೂ ಪೌಷ್ಟಿಕ ಸತ್ವಗಳನ್ನು ಒಳಗೊಂಡು