ತೂಕ ಇಳಿಸುವ ವಿಷಯಕ್ಕೆ ಬಂದಾಗ, ಆಹಾರ ತಜ್ಞರು ಅನ್ನ ಸೇವನೆಗೆ ಅಸ್ತು ಎನ್ನುವುದು ಬಹಳ ಅಪರೂಪ. ಸಮತೋಲನ ಕಾಯ್ದುಕೊಂಡರೆ , ತೂಕ ಇಳಿಸುವ ಪ್ರಕ್ರಿಯೆಯಲ್ಲಿ ಅನ್ನ ಸೇವಿಸುವ ಖುಷಿಯನ್ನು ಕೂಡ ಅನುಭವಿಸಬಹುದು. ತೂಕ ಇಳಿಸುವ ಉತ್ಸಾಹದಲ್ಲಿರುವ ಜನರು ಕಾರ್ಬೋಹೈಡ್ರೇಸ್ಗಳ ಕಡೆ ಮುಖ ಮಾಡುವುದು ತೀರಾ ವಿರಳ. ಅದರಲ್ಲೂ ಅನ್ನ ಸೇವನೆಯನ್ನಂತೂ ಬೇಡ ಎನ್ನುವವರೇ ಹೆಚ್ಚು. ಅದು ದೇಹದ ತೂಕವನ್ನು ಹೆಚ್ಚಿಸುತ್ತದೆ ಎಂಬ ಭೀತಿ ಅವರದ್ದು. ಎಲ್ಲ ರೀತಿಯ ಪಲ್ಯ, ಸಾಂಬಾರ್ಗಳ