ಬೆಂಗಳೂರು: ಪಾಲಕ್ ಸೊಪ್ಪು ಫ್ರೆಶ್ ಆಗಿದ್ದರೆ ಅದರ ಅಂದಕ್ಕೆ ಮರುಳಾಗಿಯಾದರೂ, ಕೊಳ್ಳದೇ ಇರುವುದಿಲ್ಲ. ಅಂತಹ ಹಚ್ಚ ಹಸಿರ ಸೊಪ್ಪು ತಿಂದು ಹಳದಿ ಹಲ್ಲು ಬಿಳಿ ಮಾಡಬಹುದಂತೆ! ಇನ್ನೂ ಏನೇನು ಆರೋಗ್ಯಕರ ಅಂಶಗಳು ಇದರಲ್ಲಿವೆ ನೋಡೋಣ. ಪಾಲಕ್ ಸೊಪ್ಪಿನಲ್ಲಿ ಕ್ಯಾಲ್ಶಿಯಂ ಅಂಶ ಹೆಚ್ಚಿರುತ್ತದೆ. ಅಲ್ಲದೆ ಇದರಲ್ಲಿ ಕೊಳೆ ತೆಗೆಯುವ ಗುಣವೂ ಇದೆ. ಇದರಿಂದಾಗಿ ಪಾಲಕ್ ಸೊಪ್ಪು ತಿನ್ನುವುದರಿಂದ ಹಲ್ಲು ಗಟ್ಟಿಯಾಗುವುದಷ್ಟೇ ಅಲ್ಲ, ಹಲ್ಲಿನ ಹಳದಿಗಟ್ಟುವಿಕೆ ತೆಗೆದು ಹೊಳೆಯುವಂತೆ ಮಾಡುತ್ತದೆ.ಇಷ್ಟೇ ಅಲ್ಲ