ಬೆಂಗಳೂರು: ಪ್ರತಿಯೊಬ್ಬರಿಗೂ ಜೀವನದ ಮೇಲೆ ಆಸೆ ಇದ್ದೇ ಇರುತ್ತದೆ. ತಾನು ಹೆಚ್ಚು ಕಾಲ ಬದುಕಬೇಕೆಂಬುದಕ್ಕಾಗಿ ಮುನಷ್ಯ ಪ್ರತಿನಿತ್ಯ ಹೋರಾಟ ಮಾಡುತ್ತಾನೆ. ಈ ರೀತಿ ದೀರ್ಘಾಯುಷಿಗಳಾಗಬೇಕಾದರೆ ಕೆಲವು ಆಹಾರವೂ ಪ್ರಮುಖ ಪಾತ್ರ ವಹಿಸುತ್ತವೆ. ಅವು ಯಾವುವು ನೋಡೋಣ. ನೆಲ್ಲಿಕಾಯಿ ಬೆಟ್ಟದ ನೆಲ್ಲಿಕಾಯಿ ಸುದೀರ್ಘ ಜೀವನಕ್ಕೆ ರಹದಾರಿ ಎಂದು ಹಲವು ಆಯುರ್ವೇದ ತಜ್ಞರು ಹೇಳುತ್ತಾರೆ. ದೇಹದ ಮೂರು ಸ್ಥಿತಿಗಳಾದ ವಾತ, ಕಫ ಮತ್ತು ಪಿತ್ಥ ಇವು ಮೂರನ್ನೂ ಸಮತೋಲನದಲ್ಲಿಡಲು ನೆಲ್ಲಿಕಾಯಿ ಸಹಕಾರಿ.