ದೇಹದ ಪೋಷಣೆಗೆ ಬೇಕಾಗುವಂತಹ ಎಲ್ಲಾ ಅಂಶಗಳನ್ನು ಒಳಗೊಂಡಿರುವ ಮೊಟ್ಟೆಯನ್ನು ತಿಂದರೆ ಅದು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತದೆ. ಹಿಂದಿನಿಂದಲೂ ಮೊಟ್ಟೆಯ ಬಗ್ಗೆ ಕೆಲವು ಕೆಟ್ಟ ಅಭಿಪ್ರಾಯಗಳು ಇದ್ದವು. ಆದರೆ ಸಂಶೋಧನೆಗಳು ಮೊಟ್ಟೆಯಲ್ಲಿ ಇರುವಂತಹ ಲಾಭಗಳನ್ನು ಪತ್ತೆ ಮಾಡಿದ ಬಳಿಕ ಮೊಟ್ಟೆಯು ಜನಪ್ರಿಯವಾಗುತ್ತಾ ಸಾಗಿದೆ. ಹೃದಯದ ಕಾಯಿಲೆ ಮತ್ತು ಮೊಟ್ಟೆಯ ಮಧ್ಯೆ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಅಮೆರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್ ಹೇಳಿದೆ