ಹೌದು, ಪತಿ-ಪತ್ನಿ ಅಥವಾ ಯಾವುದೇ ಪ್ರೀತಿಪಾತ್ರರು ಜತೆಯಾಗಿ ವ್ಯಾಯಾಮ ಮಾಡುವುದು ಒಳ್ಳೆಯದು. ಇದರಿಂದ ಆರೋಗ್ಯ ಮಾತ್ರವಲ್ಲ, ಸಂಬಂಧವೂ ಸುಧಾರಿಸುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ. ಅಷ್ಟೇ ಅಲ್ಲ, ಜತೆಯಾಗಿ ಇಂತಹ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಜೋಡಿ ವಿಚ್ಛೇದನ ಮಾಡಿಕೊಳ್ಳುವುದು ಕಡಿಮೆ ಎಂದೂ ಹೇಳಲಾಗಿದೆ.ಪತ್ನಿಯ ಬಳಿ ಈ ಮಾತನ್ನು ಹೇಳಿನೋಡಿ. ಅಯ್ಯೊ, ಬೆಳಗ್ಗಿನ ಕೆಲಸ ಯಾರು ಮಾಡುತ್ತಾರೆ? ನೀವು ಮಾಡುತ್ತೀರಾ? ಮಕ್ಕಳನ್ನು ಶಾಲೆಗೆ ಸಿದ್ಧಪಡಿಸುವುದು ಹೇಗೆ?’ ಇತ್ಯಾದಿ ಕೊರತೆಗಳ ಮಾಲೆಯನ್ನೇ ಮುಂದಿಡುತ್ತಾರೆ. ಆದರೆ, ಹೇಗಾದರೂ