ಲಂಡನ್: ಎಬೋಲಾ ಮಾರಕ ರೋಗ. ಹಂದಿ ಜ್ವರದಂತೆ ಇದು ವಿಶ್ವದಾದ್ಯಂತ ತೀವ್ರವಾಗಿ ಹರಡುತ್ತಿರುವ ವೈರಾಣು ರೋಗ. ಇದೀಗ ಇದಕ್ಕೆ ಔಷಧ ಕಂಡುಕೊಳ್ಳುವ ವಿಶ್ವ ಆರೋಗ್ಯ ಸಂಸ್ಥೆಯ ಪ್ರಯತ್ನ ಯಶಸ್ವಿಯಾಗಿದೆ.ಇದಕ್ಕೆ ಒಂದು ಪ್ರತಿರೋಧಕ ಚುಚ್ಚುಮದ್ದನ್ನು ಯಶಸ್ವಿಯಾಗಿ ಪತ್ತೆ ಮಾಡಲಾಗಿದ್ದು, ಇದರಿಂದ ಜೀವಕ್ಕೆ ಮಾರಕವಾಗಬಲ್ಲ ಎಬೋಲಾ ವೈರಾಣು ಹರಡದಂತೆ ತಡೆಯಬಹುದಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.ಇದಕ್ಕೆ ಔಷಧ ಕಂಡುಕೊಳ್ಳಲು ಸ್ವಲ್ಪ ನಿಧಾನವಾದ್ದರಿಂದ ಹಲವರು ಪ್ರಾಣ ಕಳೆದುಕೊಂಡರು. ಆದರೆ ಮುಂದಿನ ಬಾರಿ ಎಬೋಲಾ ತೀವ್ರವಾಗುವಾಗ ಅದು