ಬೆಂಗಳೂರು: ಲೈಂಗಿಕ ಜೀವನದಲ್ಲಿ ಇಬ್ಬರಿಗೂ ಸಮಾನ ಆಸಕ್ತಿಯಿದ್ದರೂ ದೈಹಿಕವಾಗಿ ಅಸಮರ್ಥವಾದಾಗ ಮಕ್ಕಳನ್ನು ಹಡೆಯುವುದು ಕಷ್ಟ. ಹೀಗಿರುವಾಗ ಬೇರೆ ಗಂಡಸಿನ ಸಹವಾಸ ಮಾಡಿಯಾದರೂ ಗರ್ಭವತಿಯಾಗಬಹುದೇ ಎಂಬುದು ಮಹಿಳೆಯೊಬ್ಬಳ ಪ್ರಶ್ನೆ.ಲೈಂಗಿಕ ಕ್ರಿಯೆ ಸಂದರ್ಭದಲ್ಲಿ ಇಬ್ಬರಲ್ಲೂ ಏನು ಸಮಸ್ಯೆಯಿದೆ ಎಂದು ತಿಳಿದುಕೊಂಡು ಅದಕ್ಕೆ ತಜ್ಞ ವೈದ್ಯರಿಂದ ಚಿಕಿತ್ಸೆ ಪಡೆದುಕೊಳ್ಳಬೇಕೇ ವಿನಹ ಬೇರೆ ಗಂಡಸಿನ ಸಹವಾಸ ಮಾಡಿದರೆ ಮುಂದೆ ಸಮಸ್ಯೆಗಳು ಹೆಚ್ಚಾಗುವುದು. ದಾಂಪತ್ಯದಲ್ಲಿ ಬಿರುಕು ಮೂಡಬಹುದು.ಇಬ್ಬರ ನಡುವಿನ ಸಮಸ್ಯೆ ಏನೆಂದು ತಿಳಿದುಕೊಂಡು ಅದಕ್ಕೆ ಚಿಕಿತ್ಸೆ ಪಡೆಯಬೇಕು.