ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಕೀಲು ನೋವು ಸಾಮಾನ್ಯವಾಗಿಬಿಟ್ಟಿದೆ. ವಯಸ್ಸಿನ ಅಂತರವಿಲ್ಲದೇ ಬಿಡದೇ ಕಾಡುವ ನೋವುಗಳಿಂದ ಸುಲಭವಾಗಿ ಮುಕ್ತಿ ಪಡೆಯಲು ಕೆಲವು ಉಪಾಯಗಳಿವೆ. ಮುಖ್ಯವಾಗಿ ಸಮಮತೋಲಿತ ಆಹಾರ ಸೇವಿಸಿ. ಸಾಕಷ್ಟು ತರಕಾರಿ, ಹಣ್ಣು ಮತ್ತು ಡೈರಿ ಉತ್ಪನ್ನಗಳು, ಋತುವಿಗೆ ತಕ್ಕ ಹಣ್ಣುಗಳನ್ನು ಸೇವಿಸುತ್ತಿದ್ದರೆ ಕೀಲು ನೋವು ಬರದು. ಅಲ್ಲದೆ ವಿಟಮಿನ್ ಹೆಚ್ಚಿರುವ ಆಹಾರ ಸೇವಿಸುವುದು ತುಂಬಾ ಮುಖ್ಯ.ಅದರಲ್ಲೂ ಮುಖ್ಯವಾಗಿ ವಿಟಮಿನ್ ಡಿ, ಸಿ, ಕೆ ಇರುವ ಆಹಾರಗಳನ್ನು ಹೆಚ್ಚು ಸೇವಿಸಬೇಕು.