ಒಣಗಿಸಿದ ಅಂಜೂರದಲ್ಲಿ ಪ್ರೋಟೀನ್, ನಾರಿನಾಂಶ ಮತ್ತು ಸಣ್ಣ ಪ್ರಮಾಣದ ಕೊಬ್ಬು ಹಾಗೂ ಕ್ಯಾಲ್ಸಿಯಂ, ಪೊಟಾಶಿಯಂ,ಕಬ್ಬಿಣಾಂಶ ಮತ್ತು ತಾನ್ರ ಇದ್ದು ಇದು ದೇಹಕ್ಕೆ ಅಗತ್ಯವಾದ ಎಲ್ಲಾ ಪೋಷಕಾಂಶಗಳನ್ನು ಒದಗಿಸಲು ಸಹಕಾರಿ. ಇದರಲ್ಲಿ ನಾರಿನಾಂಶ, ಪ್ರೋಟೀನ್ ಇರುವ ಕಾರಣದಿಂದಾಗಿ ಹೆಚ್ಚು ಅನಗತ್ಯ ಆಹಾರಗಳನ್ನು ತಿನ್ನದಂತೆ ತಡೆಯುತ್ತದೆ. ಇದರಿಂದ ದೇಹದ ತೂಕ ನಿರ್ವಹಣೆ ಮಾಡುವುದು ಸುಲಭ. ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದರೆ, ಇದನ್ನ ಸಂಜೆಯ ಸಮಯದಲ್ಲಿ ಸೇವನೆ ಮಾಡುವುದು ಹೆಚ್ಚು ಪ್ರಯೋಜನ