ವಯಸ್ಸಾದಂತೆ ದೈಹಿಕ ಸಮಸ್ಯೆಗಳೂ ಹೆಚ್ಚಾಗುತ್ತವೆ. ವೃದ್ಧಾಪ್ಯ ದಲ್ಲಿ ಕೀಲು ನೋವು ಮತ್ತು ಬೆನ್ನು ನೋವು ಸಾಮಾನ್ಯ. ಎದ್ದು ಕೂರುವುದಕ್ಕೂ ತೊಂದರೆಯಾಗುತ್ತದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ, ಕ್ರಮೇಣ ಈ ಸಮಸ್ಯೆಗಳು ಹೆಚ್ಚಾಗಲು ಪ್ರಾರಂಭವಾಗುತ್ತೆ. ವಾಕಿಂಗ್ ಮತ್ತು ದೈನಂದಿನ ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುವುದಿಲ್ಲ.ಅಸ್ವಸ್ಥತೆ ಸದಾ ಕಾಡುತ್ತದೆ. ನೋವು ಕಡಿಮೆ ಮಾಡಿಕೊಳ್ಳಲು ವೃದ್ಧಾಪ್ಯದಲ್ಲಿ ಜನರು ನೋವು ನಿವಾರಕ ಮಾತ್ರೆಗಳನ್ನು ಸೇವಿಸುತ್ತಾರೆ. ಈ ಔಷಧಿಗಳು ದೇಹಕ್ಕೆ ಸ್ವಲ್ಪ ಸಮಯ ವಿಶ್ರಾಂತಿ ನೀಡುತ್ತವೆ. ನಂತರ