ಸಲಾಡ್ ತಿನ್ನವುದರಿಂದ ಆಗುವ ಆರೋಗ್ಯ ಪ್ರಯೋಜನಗಳು

ದೆಹಲಿ| Sudha| Last Updated: ಬುಧವಾರ, 17 ಆಗಸ್ಟ್ 2016 (12:01 IST)
ಪ್ರತಿ ನಿತ್ಯ ಸಲಾಡ್ ತಿನ್ನುವುದರಿಂದ ದೇಹಕ್ಕೆ ಅಗತ್ಯವಾದ ಶಕ್ತಿ ಪಡೆಯಲು ಸಾಧ್ಯ. ಊಟದಲ್ಲಿ ಸಲಾಡ್  ಚರ್ಮದ ಸೌಂದರ್ಯ, ತೂಕ ಕಡಿಮೆ, ಹಾಗೂ ಜೀರ್ಣಕ್ರಿಯೆಗೆ ಹೆಚ್ಚು ಸಹಾಯ ಮಾಡಬಲ್ಲದ್ದು, ಡಯೆಟ್ ಮಾಡುವವರಿಗೆ ಹಾಗೂ ಬೆಳೆಯುವ ಮಕ್ಕಳಿಗೆ ಪ್ರೋಟೀನ್ ಅತ್ಯವಶ್ಯಕ..
ಮೊಳಕೆ ಕಾಳು, ವಿವಿಧ ತರಕಾರಿಗಳ ಸಲಾಡ್ ಹೆಚ್ಚು ಉಪಯೋಗಕಾರಿ. ಸಲಾಡ್‌ಗಳಿಂದ ಐದು ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಮಾಹಿತಿ ಇಲ್ಲಿದೆ
 
ತೂಕ ಕಡಿಮೆ:
ದೇಹಕ್ಕೆ ಪೌಷ್ಟಿಕಾಂಶಗಳನ್ನು ಒದಗಿಸುವಲ್ಲಿ ಸಲಾಡ್ ಪ್ರಮುಖ ಪಾತ್ರ ವಹಿಸುತ್ತದೆ. ಕಚ್ಚಾ ಸಲಾಡ್‌ನಲ್ಲಿ ಕ್ಯಾಲೋರಿ ಕಡಿಮೆ ಇರುವುದರಿಂದ ತೂಕ ಕಳೆದುಕೊಳ್ಳಲು ಸಹಾಯವಾಗುತ್ತದೆ. 
 
ಹಸಿರು ಸಲಾಡ್ ಹಾಗೂ ಹಣ್ಣಿನ ಸಲಾಡ್ ಸೇವಿಸುವುದರಿಂದ ತೂಕ ಹೆಚ್ಚಾಗುವುದಿಲ್ಲ. ಊಟಕ್ಕಿಂತ ಮೊದಲು ಅಥವಾ ಮೊದಲು ಸಲಾಡ್ ಸೇವಿಸಬೇಕು. ತೂಕ ಕಡಿಮೆ ಮಾಡಲು ಸಲಾಡ್ ಸಹಾಯಕಾರಿ. 
 
ರೋಗಗಳನ್ನು ತಡೆಗಟ್ಟುತ್ತದೆ ಹಸಿರು ಸಲಾಡ್:
ಹಸಿರು ಎಲೆಗಳ ಮತ್ತು ಹಣ್ಣುಗಳ ಸಲಾಡ್ ತಿನ್ನುವುದರಿಂದ ಹಲವು ರೋಗಗಳಿಗೆ ಮುಕ್ತಿ ನೀಡಬಲ್ಲದ್ದು, ಕ್ಯಾನ್ಸರ್ ಹಾಗೂ ಹೃದಯ ಸಂಬಂಧಿತ ಕಾಯಿಲೆಗಳನ್ನು ತಡೆಗಟ್ಟಬಲ್ಲವು ಶಕ್ತಿ ಸಲಾಡ್‌ನಲ್ಲಿದೆ.
> ಚರ್ಮಕ್ಕೆ ಆರೈಕೆಗೆ ಸಲಾಡ್:
ಅಲ್ಲದೇ ಸಲಾಡ್ ಚರ್ಮಕ್ಕೆ ಒಳ್ಳೆಯದು.. ಚರ್ಮವನ್ನು ಮೃದುವಾಗಿಸುವಲ್ಲಿ ಹಾಗೂ ಸುಂದರವಾಗಿ ಕಾಣಲು ಚರ್ಮಕ್ಕೆ ಸಲಾಡ್ ಅತ್ಯವಶ್ಯಕ. 
 
ಜೀರ್ಣಕ್ರಿಯೆಗೆ ಸಹಾಯಕಾರಿ:
ಹಸಿರು ತರಕಾರಿಗಳ ಸಲಾಡ್ ಫೈಬರ್ ಅಂಶ ಇರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಆರೋಗ್ಯವಾಗಿಡಲು ಸಹಾಯಕಾರಿಯಾಗಿದೆ. 
 
ಕೊಬ್ಬು ನಿವಾರಿಸುತ್ತದೆ:
ತರಕಾರಿಗಳ ಸಲಾಡ್ ಕೊಬ್ಬು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕೊಬ್ಬಿನ ಆಹಾರ ತಿನ್ನುವವರಿಗೆ ಇದು ಸಹಾಯ ಮಾಡಬಲ್ಲದ್ದು.>
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 
 
ತೂಕ ಕಡಿಮೆ


ಇದರಲ್ಲಿ ಇನ್ನಷ್ಟು ಓದಿ :