ಬೆಂಗಳೂರು : ಉಗುರುಗಳು ಕೈಗಳ ಅಂದವನ್ನು ಹೆಚ್ಚಿಸುತ್ತವೆ. ಆದರೆ ಈ ಉಗುರುಗಳು ಕೆಲವೊಮ್ಮೆ ಒರಟಾಗುತ್ತವೆ. ಇದರಿಂದ ಉಗುರುಗಳ ಅಂದ ಕೆಡುತ್ತದೆ. ಈ ಸಮಸ್ಯೆ ನಿವಾರಿಸಲು ಈ ಟಿಪ್ ಫಾಲೋ ಮಾಡಿ. *ಮೊದಲನೇಯದಾಗಿ ಪೌಷ್ಟಿಕಾಂಶಯುಕ್ತ , ಪ್ರೋಟಿನ್ ಯುಕ್ತ ಆಹಾರವನ್ನು ಸೇವಿಸಿ, ಸೊಪ್ಪುಗಳು, ಮಾಂಸಗಳನ್ನು ಸೇವಿಸಿ.* ಉಗುರುಗಳು ಒರಟಾಗುವುದನ್ನು ತಡೆಯಲು ಆಗಾಗ ಅವುಗಳನ್ನು ಮಸಾಜ್ ಮಾಡುತ್ತಿರಬೇಕು.*ಉಗುರುಗಳಿಗೆ ರಾಸಾಯನಿಕ ವಸ್ತುಗಳನ್ನು ಹಚ್ಚುವುದನ್ನು ಕಡಿಮೆ ಮಾಡಿ.*ಉಗುರನ್ನು ಆಗಾಗ ಕತ್ತರಿಸುತ್ತಿರಿ.*ಕೈಗಳನ್ನು ಗ್ಲೌಸ್ ಗಳಿಂದ ಮುಚ್ಚಿಡಿ.