ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ನಗರವಾಸಿಗಳಿಗೆ ವಾಯು ಮಾಲಿನ್ಯದ್ದೇ ಸಮಸ್ಯೆ. ಇದರಿಂದಾಗಿ ಆರೋಗ್ಯ ಹದಗೆಡುವುದು ಸಾಮಾನ್ಯ. ಕೆಲವು ಆಹಾರ ವಸ್ತುಗಳು ಇದನ್ನು ಕಡಿಮೆ ಮಾಡಬಹುದು.ಟೊಮೆಟೊ ಟೊಮೆಟೊದಲ್ಲಿ ಸಾಕಷ್ಟು ಪೋಷಕಾಂಶಗಳಿದ್ದು, ಇದು ಹಲವಾರು ರೀತಿಯಲ್ಲಿ ನಮ್ಮ ಆರೋಗ್ಯಕ್ಕೆ ಒಳ್ಳೆಯದನ್ನು ಮಾಡುತ್ತದೆ. ಅದರಲ್ಲೂ ಮುಖ್ಯವಾಗಿ ಶ್ವಾಸಕೋಶದ ಆರೋಗ್ಯವನ್ನು 10 ವರ್ಷದಷ್ಟು ಹೆಚ್ಚು ಕಾಪಾಡುತ್ತದೆ.ಪಾಲಕ್ ಸೊಪ್ಪು ಪಾಲಕ್, ಬಸಳೆ ಸೊಪ್ಪು ಮುಂತಾದ ಸೊಪ್ಪು ತರಕಾರಿಗಳಲ್ಲಿರುವ ಪೋಷಕಾಂಶಗಳು ರೋಗಗಳನ್ನು ಕಡಿಮೆ ಮಾಡಿ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.