ಬೆಂಗಳೂರು: ಕಿಡ್ನಿ ಕಲ್ಲು ಸಮಸ್ಯೆಯಿಂದ ಬಳಲುತ್ತಿರುವವರು ಅತಿಯಾದ ಹೊಟ್ಟೆ ನೋವು, ಉರಿಮೂತ್ರ ಅನುಭವಿಸುತ್ತಾರೆ. ಈ ಸಮಸ್ಯೆಯಿಂದ ಪಾರಾಗಲು ನಾವು ಯಾವ ಆಹಾರ ಸೇವಿಸಬಾರದು ನೋಡೋಣ. ಉಪ್ಪು ಇದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವುದೇ. ಉಪ್ಪು ಹೆಚ್ಚು ಸೇವಿಸಿದರೆ ನಮ್ಮ ದೇಹದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸೋಡಿಯಂ ಉತ್ಪತ್ತಿಯಾಗುತ್ತದೆ. ಇದು ಕಿಡ್ನಿ ಕಲ್ಲಿಗೆ ಕಾರಣವಾಗಬಹುದು.ಕ್ಯಾಲ್ಶಿಯಂ ಕಿಡ್ನಿ ಕಲ್ಲು ಎನ್ನುವುದು ಕ್ಯಾಲ್ಶಿಯಂ ಪ್ರಮಾಣ ಹೆಚ್ಚುವುದರಿಂದಲೂ ಬರಬಹುದು. ಅಧಿಕ ಪ್ರಮಾಣದ ಕ್ಯಾಲ್ಶಿಯಂ ಕಿಡ್ನಿ ಕಲ್ಲಾಗಿ