ಬೆಂಗಳೂರು : ಹುರುಳಿ ಕಾಳನ್ನು ಚೆನ್ನಾಗಿ ಅಡುಗೆಯಲ್ಲಿ ಬಳಸುತ್ತಾರೆ. ಇದರಿಂದ ತಯಾರಿಸಿದ ಅಡುಗೆ ರುಚಿಕರವಾಗಿರುತ್ತದೆ. ಹಾಗೇ ಇದರಿಂದ ನಿಮ್ಮ ಆರೋಗ್ಯವನ್ನು ಕೂಡ ಹೆಚ್ಚಿಸಿಕೊಳ್ಳಬಹುದು. *ಹುರುಳಿ ಕಾಳನ್ನು ಸೇವಿಸುವುದರಿಂದ ಕೆಮ್ಮು, ಶೀತ, ಕಫ ಕಡಿಮೆಯಾಗುತ್ತದೆ. * ಹುರುಳಿ ಕಾಳಿನ ಜೊತೆಗೆ ಉಪ್ಪು, ಕರಿಮೆಣಸು, ಜೀರಿಗೆ ಮಿಕ್ಸ್ ಮಾಡಿ ಸೇವಿಸಿದರೆ ದೇಹದ ಬೊಜ್ಜು ಕರಗುತ್ತದೆ. *ನೆನೆಸಿದ ಹುರುಳಿ ಕಾಳನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಮಲಬದ್ಧತೆ, ಬಿಳಿ ಮುಟ್ಟು ಸಮಸ್ಯೆ ನಿವಾರಣೆಯಾಗುತ್ತದೆ.