ಬೆಂಗಳೂರು : ಸಾಮಾನ್ಯವಾಗಿ ಮಕ್ಕಳಿಗೆ ಅಲರ್ಜಿ ಸಮಸ್ಯೆ ಸಣ್ಣ ವಯಸ್ಸಿನಲ್ಲಿಯೇ ಕಾಡಲು ಶುರುವಾಗುತ್ತದೆ. ಇದರಿಂದ ಉಸಿರಾಟದ ಸಮಸ್ಯೆ, ಅಸ್ತಮಾ ಸಮಸ್ಯೆ ಕಾಡುತ್ತದೆ. ಈ ಸಮಸ್ಯೆಯಿಂದ ಮಕ್ಕಳನ್ನು ಕಾಪಾಡಲು ಈ ಆಹಾರವನ್ನು ನೀಡಿ. ಸಂಶೋಧನೆಯೊಂದರ ಪ್ರಕಾರ, ಪಾಲಿಅನ್ಸಾಚುರೇಟೆಡ್ ಕೊಬ್ಬಿನ ಆಮ್ಲ ಅಲರ್ಜಿ ವಿರುದ್ಧ ಮಕ್ಕಳು ಹೋರಾಡಲು ನೆರವಾಗುತ್ತದೆ. ಪಾಲಿಅನ್ಸಾಚುರೇಟೆಡ್ ಕೊಬ್ಬಿನ ಆಮ್ಲದಲ್ಲಿ ಒಮೇಗಾ-3 ಮತ್ತು ಒಮೇಗಾ 6 ಕೊಬ್ಬಿನಾಂಶವಿರುತ್ತದೆ. ಇದನ್ನು ಆರ್ಕಿಡೋನಿಕ್ ಆ್ಯಸಿಡ್ ಎಂದು ಕರೆಯುತ್ತಾರೆ. ಬಾದಾಮಿ, ಮೀನು ಹಾಗೂ ಸೋಯಾಬೀನ್