ಬೆಂಗಳೂರು : ಋತುಚಕ್ರದ ನೋವು ಮಹಿಳೆಯರಿಗೆ ಸಾಮಾನ್ಯವಾದದ್ದು. ಆ ಸಂದರ್ಭದಲ್ಲಿ ಕಿಬ್ಬೊಟ್ಟೆ ಮತ್ತು ಬೆನ್ನು ನೋವು ಸಾಮಾನ್ಯವಾಗಿ ಕಾಡುತ್ತದೆ. ಕೆಲವರಿಗೆ ವಾಕರಿಕೆ ಮತ್ತು ಮಾನಸಿಕವಾಗಿ ಖಿನ್ನತೆಯ ಭಾವನೆ ಮೂಡುವ ಸಾಧ್ಯತೆ ಇರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಮೆಂತೆ ಚಹಾ ಸೇವನೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆಯಂತೆ.ಮೆಂತೆಯು ರಕ್ತದಲ್ಲಿರುವ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡಿ ಅಧಿಕ ಪ್ರಮಾಣದ ಕಬ್ಬಿಣಾಂಶವನ್ನು ದೇಹಕ್ಕೆ ನೀಡುತ್ತದೆ. ಹೀಗಾಗಿ, ವಿವಿಧ ಪ್ರೋಟಿನ್ ಹಾಗೂ ಪೋಷಕಾಂಶಗಳನ್ನು ಒಳಗೊಂಡಿರುವ ಮೆಂತೆ ಮನುಷ್ಯನಿಗೊಂದು ದಿವ್ಯ ಔಷಧ