ನಮ್ಮ ದೇಹಕ್ಕೆ ಶಕ್ತಿಯನ್ನು ಒದಗಿಸುವಲ್ಲಿ ಒಣ ಹಣ್ಣುಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಅಂತಹ ಡ್ರೈ ಫ್ರೂಟ್ಗಳಲ್ಲಿ ಮೊದಲು ನೆನಪಾಗುವುದು ಬಾದಾಮಿ. ಬಾದಾಮಿಯು ಹಸಿಯಾಗಿ ಸಿಗುವುದು ಬಹಳ ಕಷ್ಟ. ಆದರೆ ಬಾದಾಮಿಯಲ್ಲಿ ದೇಹಕ್ಕೆ ಶಕ್ತಿ ಒದಗಿಸುವ ಹಲವಾರು ರೀತಿಯ ವಿಟಾಮಿನ್ ಪೋಷಕಾಂಶಗಳು ಇದೆ. ಅತ್ಯಧಿಕ ಪೋಷಕಾಂಶಗಳು ಮತ್ತು ಹೇರಳವಾಗಿ ವಿಟಾಮಿನ್ ಮತ್ತು ಕಡಿಮೆ ಕೊಲೆಸ್ಟ್ರಾಲ್ ಇರುವ ಪದಾರ್ಥವೆಂದರೆ ಬಾದಾಮಿ. ಅದನ್ನು ನಾವು ನೆನೆಸಿದ ನಂತರವೇ ಬಳಸುವುದು ಜಾಸ್ತಿ. ಬಾದಾಮಿಯಲ್ಲಿ ಶೇ. 16.5 ರಷ್ಟು ಪ್ರೋಟೀನ್ ಮತ್ತು ಶೇ.41 ರಷ್ಟು ಎಣ್ಣೆಯ ಅಂಶವಿರುವುದರಿಂದ ಯಾವ ರೀತಿಯಲ್ಲಾದರೂ ಬಳಕೆ ಮಾಡಬಹುದು.