ಆರೋಗ್ಯ : ಮಧುಮೇಹ ಮತ್ತು ಹೃದ್ರೋಗದಂತಹ ಪರಿಸ್ಥಿತಿಗಳ ಅಪಾಯವನ್ನು ಕಡಿಮೆ ಮಾಡಲು ನಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸುರಕ್ಷಿತ ವ್ಯಾಪ್ತಿಯಲ್ಲಿ ಇಡುವುದರ ಪ್ರಾಮುಖ್ಯತೆಯನ್ನು ಗಮನದಲ್ಲಿಟ್ಟುಕೊಂಡು ಕಾಫಿಯನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕಂತೆ. ಆಹಾರದ ಮೊದಲು ಸೇವಿಸುವ ಬ್ಲ್ಯಾಕ್ ಕಾಫಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಏರುಪೇರು ಮಾಡಬಹುದು ಎಂದು ಹೊಸ ಅಧ್ಯಯನದಿಂದ ತಿಳಿದು ಬಂದಿದೆ. ಬಾತ್ ವಿಶ್ವವಿದ್ಯಾಲಯದ (ಯುಕೆ) ನ್ಯೂಟ್ರಿಷನ್, ವ್ಯಾಯಾಮ ಮತ್ತು ಚಯಾಪಚಯ ಕೇಂದ್ರದ ಸಂಶೋಧನೆಯು ಮುಂಜಾನೆಯ ಕಾಫಿಯಿಂದ ಆಗುವ ಆರೋಗ್ಯದ