ನುಗ್ಗೇಕಾಯಿಯ ರುಚಿಯನ್ನು ಸವಿಯದೇ ಇರುವವರ ಸಂಖ್ಯೆ ತುಂಬಾ ವಿರಳ. ಸಭೆ ಸಮಾರಂಭಗಳಲ್ಲಿ ನುಗ್ಗೇಕಾಯಿಯನ್ನು ಬಳಸಿದ ಪದಾರ್ಥವನ್ನೇ ಮಾಡುವುದು ಜಾಸ್ತಿ. ಭಾರತದಲ್ಲಿಯೂ ನುಗ್ಗೇಕಾಯಿಯ ಉತ್ಪಾದನೆ ಬಹಳ ಚೆನ್ನಾಗಿದೆ. ವಾಸ್ತವದಲ್ಲಿ ನುಗ್ಗೇಕಾಯಿಯು ಪೌಷ್ಠಿಕ ಆಹಾರವಾಗಿದ್ದು, ಅದರ ಸೇವನೆಯು ನಮ್ಮ ಆರೋಗ್ಯದ ಮೇಲೆ ಉತ್ತಮ ಪರಿಣಾಮವನ್ನು ಬೀರುತ್ತದೆ. ಕ್ಯಾಲ್ಸಿಯಂ ಮಾತ್ರೆಗಳನ್ನು ಸೇವಿಸಿ ಕ್ಯಾಲ್ಸಿಯಂ ಹೆಚ್ಚಿಸಿಕೊಳ್ಳುವುದಕ್ಕಿಂತ ನುಗ್ಗೇಕಾಯಿಯನ್ನು ಸೇವಿಸಿದರೆ ನೈಸರ್ಗಿಕವಾಗಿ ದೇಹದಲ್ಲಿ ಕ್ಯಾಲ್ಸಿಯಂ ಅಂಶವು ಹೆಚ್ಚಳವಾಗುತ್ತದೆ. * ನುಗ್ಗೆಕಾಯಿಯಲ್ಲಿ ವಿಟಾಮಿನ್ ಸಿ ಉತ್ತಮ ಪ್ರಮಾಣದಲ್ಲಿರುವುದರಿಂದ ಸಾಮಾನ್ಯವಾಗಿ