ಬೇಸಿಗೆ ಬಂತೆಂದರೆ ಉಷ್ಣ ಪ್ರಕೃತಿಯವರ ಪಾಡು ಹೇಳಿ ತೀರದು. ಸೂಕ್ಷ್ಮ ದೇಹ ಪ್ರಕೃತಿಯ ಇಂತಹವರಿಗೆ ಎಲ್ಲಾ ಹವಾಮಾನ ಬದಲಾವಣೆಗಳಲ್ಲೂ ಶಾರೀರಿಕ ಅಸ್ವಾಸ್ಥ್ಯ ಅನುಭವಿಸುತ್ತಾರೆ. ಇವರಿಗೆ ಸೊಪ್ಪು ಚಿಗುರೆಲೆಗಳ ಮೇಲೋಗರ ಸಾಂತ್ವನ ನೀಡುತ್ತದೆ.ವಿವಿಧ ಮರಗಳ ಚಿಗುರನ್ನು ಸಂಗ್ರಹಿಸಿ ನೀರು-ಚಟ್ನಿಯಾಗಿ ಅರೆದು ಬಳಸುವುದು ಬೇಸಗೆ ಕಾಲದಲ್ಲಿ ಆರೋಗ್ಯ ಸಂರಕ್ಷಣೆಗೆ ಉಪಯುಕ್ತ. ಪೇರಳೆ,ದಡಸೆ,ಮಾವು ಇತ್ಯಾದಿಗಳನ್ನು ತೆಂಗಿನ ತುರಿ, ಉಪ್ಪು ಇತ್ಯಾದಿಗಳನ್ನು ಸೇರಿಸಿ ಅರೆದು ತಯಾರಿಸುವ ಮೇಲೋಗರ ಅಧರಕ್ಕೂ ಉದರ್ಕೂ ಹಿತಕರವಾಗಿರುತ್ತದೆ.