ಒಣದ್ರಾಕ್ಷಿ ಹಲವು ಪೋಷಕಾಂಶಗಳ ಆಗರವಾಗಿದೆ. ಒಣಫಲಗಳ ಪಟ್ಟಿಯಲ್ಲಿ ಒಣದ್ರಾಕ್ಷಿಯೂ ಒಂದು. ಆದರೆ ಬಾದಾಮಿ, ಅಕ್ರೋಟು ಮೊದಲಾದ ದುಬಾರಿ ಫಲಗಳ ಎದುರು ಈ ಒಣದ್ರಾಕ್ಷಿ ಕೊಂಚ ಅಗ್ಗವಾಗಿರುವ ಕಾರಣಕ್ಕೆ ಹೆಚ್ಚಿನವರು ಈ ಅದ್ಭುತ ಫಲಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದಿಲ್ಲ. ಆದರೆ ಇದರ ಸೇವನೆಯಿಂದ ಬಹಳಷ್ಟು ಪ್ರಯೋಜನಗಳಿವೆ. ವಿಟಾಮಿನ್, ಖನಿಜ, ಆಂಟಿ ಆಕ್ಸಿಡೆಂಟ್ಗಳನ್ನು ಹೇರಳವಾಗಿ ಹೊಂದಿರುವ ಒಣ ದ್ರಾಕ್ಷಿ, ಮಕ್ಕಳು ಮತ್ತು ದೈಹಿಕ ಕ್ಷಮತೆಯ ಕೊರತೆ ಎದುರಿಸುತ್ತಿರುವ ವ್ಯಕ್ತಿಗಳಿಗೆ ಅತ್ಯುತ್ತಮ. ಅಷ್ಟೇ ಅಲ್ಲ,