ಬೆಂಗಳೂರು: ಬೀಟ್ ರೂಟ್ ಎಂಬ ಗಡ್ಡೆ ತರಕಾರಿ ನಮ್ಮ ದೇಹಕ್ಕೆ ಹಲವು ರೀತಿಯಲ್ಲಿ ಒಳ್ಳೆಯದು. ಅದರ ಜ್ಯೂಸ್ ಮಾಡಿ ಕುಡಿಯುವುದರಿಂದ ಏನೇನು ಲಾಭ ನೋಡೋಣ. ರಕ್ತದೊತ್ತಡ ರಕ್ತದೊತ್ತಡ ನಿಯಂತ್ರಿಸಲು ಬೀಟ್ ರೂಟ್ ರಸ ಉತ್ತಮ. ಇದರಲ್ಲಿರುವ ನೈಸರ್ಗಿಕ ನೈಟ್ರೇಟ್ ಅಂಶ ರಕ್ತನಾಳಗಳಲ್ಲಿ ನೈಟ್ರಿಕ್ ಆಕ್ಸೈಡ್ ಅಂಶ ಹೆಚ್ಚಿಸಲು ನೆರವಾಗುತ್ತದೆ. ಇದರಿಂದ ನಮ್ಮ ಮೆದುಳು, ಹೃದಯಕ್ಕೆ ಬೇಕಾದಷ್ಟು ರಕ್ತ ಪೂರೈಕೆಯಾಗುತ್ತದೆ.ಚರ್ಮದ ಕಾಂತಿ ಬೀಟ್ ರೂಟ್ ನಲ್ಲಿ ರಕ್ತ ಶುದ್ಧೀಕರಿಸುವ ಅಂಶ