ಬೆಂಗಳೂರು: ನಮ್ಮ ಅಡುಗೆ ಮನೆಯಲ್ಲಿ ಶುಂಠಿ ಇಲ್ಲದೇ ಇರುವುದಿಲ್ಲ. ಶುಂಠಿ ಶೀತ ಸಂಬಂಧೀ ರೋಗಗಳಿಗೆ ಉತ್ತಮ ಮನೆ ಮದ್ದು ಎಂದು ಕೇಳಿರುತ್ತೇವೆ. ಇದರ ಉಪಯೋಗಗಳು ಏನೇನು ಎಂದು ನೋಡೋಣ.ಗಂಟಲು ನೋವು, ಕೆಮ್ಮಿನಿಂದಾಗಿ ಗಂಟಲು ಕೆರೆದಂತಾಗುತ್ತಿದ್ದರೆ, ಹಸಿ ಶುಂಠಿ ಮತ್ತು ಉಪ್ಪು ಹಾಕಿ ತಿಂದರೆ ಗಂಟಲು ಕೆರೆತ ನಿವಾರಣೆಯಾಗುತ್ತದೆ. ರಾತ್ರಿಯಿಡೀ ಕೆಮ್ಮಿನಿಂದಾಗಿ ನಿದ್ರೆ ಮಾಡಲೂ ತೊಂದರೆಯಾಗುತ್ತಿದ್ದರೆ, ಹೀಗೆ ಮಾಡಬಹುದು.ಶುಂಠಿ ಜೀರ್ಣಕ್ರಿಯೆಗೂ ಸಹಕಾರಿ. ಹಲಸಿನ ಕಾಯಿ ತಿಂದರೆ ಶುಂಠಿ ತಿನ್ನಬೇಕು ಎಂಬ ಆಡುಮಾತಿದೆ.