ಬೆಂಗಳೂರು: ಹಿಂದಿನ ಕಾಲದಲ್ಲಿ ಬಾಯಾರಿಕೆಯಾದರೆ ನೀರಿನ ಜತೆಗೆ ಬೆಲ್ಲ ತಿನ್ನುವ ಅಭ್ಯಾಸ ಬೆಳೆಸಿಕೊಂಡಿದ್ದರು. ಅದು ಕೇವಲ ಹವ್ಯಾಸವಷ್ಟೇ ಅಲ್ಲ. ಅದರ ಹಿಂದೆ ಆರೋಗ್ಯದ ಗುಟ್ಟೂ ಇದೆ. ಬೆಲ್ಲ ತಿನ್ನುವುದರ ಉಪಯೋಗಗಳು ಏನೆಂದು ನೋಡೋಣ. ಬೆಲ್ಲದಲ್ಲಿ ಕಬ್ಬಿಣದಂಶ ಜಾಸ್ತಿ. ಬೆಲ್ಲ ತಿನ್ನುವುದರಿಂದ ಮಲಬದ್ಧತೆ ನಿವಾರಣೆಯಾಗುವುದಲ್ಲದೆ, ಮಲ ವಿಸರ್ಜನೆ ಸುಗಮವಾಗುವುದು. ಅಲ್ಲದೆ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರ ಹಾಕುವ ಗುಣ ಹೊಂದಿದೆ. ಅಲ್ಲದೆ ರಕ್ತ ಶುದ್ದೀಕರಿಸುವ ಗುಣವೂ ಇದಕ್ಕಿದೆ. ಅಲ್ಲದೆ ಕೀಲು