ತರಕಾರಿಗಳು, ಕಾಯಿ-ಪಲ್ಯೆಗಳು, ಹಣ್ಣುಗಳು ಮನುಷ್ಯನ ಜೀವನದಲ್ಲಿ ಬಹುಮುಖ್ಯವಾದ ಪಾತ್ರವನ್ನು ವಹಿಸುತ್ತವೆ. ಅಂತಹ ತರಕಾರಿಗಳಲ್ಲಿ ಎಲೆಕೋಸೂ ಕೂಡಾ ಒಂದು ಎಂದು ಹೇಳಬಹುದು. ಈ ತರಕಾರಿಯು ವರ್ಷದ ಎಲ್ಲಾ ಸಮಯದಲ್ಲಿಯೂ ಸಿಗುತ್ತದೆ. ಹೆಸರಿಗೆ ತಕ್ಕಂತೆ ಎಲೆಗಳ ಪದರದಿಂದಲೇ ಆವೃತವಾಗಿರುವ ಈ ತರಕಾರಿಯು ಕೇವಲ ಆರೋಗ್ಯಕ್ಕೆ ಅಷ್ಟೇ ಅಲ್ಲದೇ ಸೌಂದರ್ಯವರ್ಧನೆಯಲ್ಲಿಯೂ ಬಳಕೆಯಾಗುತ್ತದೆ. - ಎಲೆಕೋಸಿನಲ್ಲಿರುವ ಬೀಟಾ ಕೆರೋಟಿನ್ ಕಣ್ಣಿನ ರಕ್ಷಣೆಗೆ ಅಗತ್ಯವಾಗಿದ್ದು, ಇದರ ಸೇವನೆಯಿಂದಾಗಿ ಕಣ್ಣಿನ ಪೊರೆ ಆಗುವುದು ತಪ್ಪುತ್ತದೆ. -