ಆರೋಗ್ಯವೇ ಭಾಗ್ಯ ಎನ್ನುವ ಮಾತಿದೆ. ಆರೋಗ್ಯವಿದ್ದರೆ ಎಲ್ಲಾ ಭಾಗ್ಯವು ಇದ್ದಂತೆ ಎನ್ನುವುದು ಇದರ ನಿಜವಾದ ಅರ್ಥ. ಆರೋಗ್ಯವಿಲ್ಲದೆ ಇದ್ದರೆ ಸಂಪಾದಿಸಿದ ಹಣವೆಲ್ಲವೂ ಆಸ್ಪತ್ರೆಗೆ ಹೋಗಿ ಸುರಿಯಬೇಕಾಗುತ್ತದೆ. ಇದರಿಂದ ಆರೋಗ್ಯದ ಕಾಳಜಿ ವಹಿಸುವುದು ಅತೀ ಅಗತ್ಯವಾಗಿ ಇರುವುದು. ಆರೋಗ್ಯವಿಲ್ಲದೆ ಇದ್ದರೆ ಖಂಡಿತವಾಗಿಯೂ ಜೀವನ ದುಸ್ತರ ಎನಿಸುವುದು. ಅದರಲ್ಲೂ ಇಂದಿನ ದಿನಗಳಲ್ಲಿ ಕಲುಷಿತ ವಾತಾವರಣ, ಒತ್ತಡ ಹಾಗೂ ಅನಾರೋಗ್ಯಕರ ಆಹಾರ ಕ್ರಮದಿಂದಾಗಿ ಆರೋಗ್ಯದ ಮೇಲೆ ಅತಿಯಾದ ಒತ್ತಡ ಬೀಳುವುದು. ನಿಮ್ಮ ಜೀವನ ಕ್ರಮದಲ್ಲಿ