ಸಿಹಿ ಸಿಹಿಯಾದ ಬೆಲ್ಲವನ್ನು ಕಬ್ಬಿನ ರಸದಿಂದ ತಯಾರಿಸಲಾಗುತ್ತದೆ.ನಿಮಗೆ ತಿಳಿದಿರಲಿ, ಬೆಲ್ಲವು ಖಾದ್ಯವನ್ನು ಸಿಹಿಯಾಗಿಸುವುದೇ ಅಲ್ಲದೇ, ಆರೊಗ್ಯವನ್ನು ಸಿಹಿಯಾಗಿಸುತ್ತದೆ. ಅದೆಷ್ಟು ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ ಈ ಬೆಲ್ಲಕ್ಕೆ ಇದೆ. ಹಾಗಾದರೆ ಯಾವೆಲ್ಲಾ ರೋಗಗಳಿಗೆ ಬೆಲ್ಲವು ಕರಾಮತ್ತು ಮಾಡುತ್ತದೆ ಎಂಬುದರ ಸಂಪೂರ್ಣವಾದ ಮಾಹಿತಿ ನಿಮ್ಮ ವಿಜಯ ಕರ್ನಾಟಕದಲ್ಲಿ. ಮಲಬದ್ಧತೆ ಬೆಲ್ಲವು ದೇಹದಲ್ಲಿನ ಜೀರ್ಣಕಾರಿ ಕಿಣ್ವಗಳನ್ನು ಸಕ್ರಿಯಗೊಳಿಸುತ್ತದೆ. ಹೀಗಾಗಿ ಕರುಳಿನ ಚಲನೆಯನ್ನು ಉತ್ತೇಜಿಸಿ ಮಲಬದ್ಧತೆಯನ್ನು ಪರಿಣಾಮಕಾರಿಯಾಗಿ ನಿವಾರಿಸುತ್ತದೆ. ಇದು ಕರುಳಿನಲ್ಲಿರುವ ಗಟ್ಟಿಯಾದ ಮಲವನ್ನು ಖಾಲಿ