ನಿಮ್ಮ ಪತ್ನಿ ವಯಸ್ಸು ಇಪ್ಪತ್ತೈದರಿಂದ ನಲವತ್ತೇ? ಹಾಗಾದರೆ ಅವರ ಆರೋಗ್ಯದ ಬಗ್ಗೆ ನೀವು ವಿಶೇಷ ಕಾಳಜಿ ವಹಿಸಬೇಕಾದ ಸಮಯವಿದು. 30 ವರ್ಷದ ಬಳಿಕ ಮಹಿಳೆಯರ ಶರೀರದಲ್ಲಿ ದೈಹಿಕ ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. ಕೆಲ ಹಾರ್ಮೋನುಗಳಲ್ಲಿ ಬದಲಾವಣೆಯಾಗುತ್ತವೆ. ಹೀಗಾಗಿ ತೂಕ ನಿಯಂತ್ರಣ ಸುಲಭ ಸಾಧ್ಯವಾಗುವುದಿಲ್ಲ. ಹೀಗಿದ್ದಾಗ ಅವರಲ್ಲಿ ಕ್ಯಾನ್ಸರ್ನಂತಹ ಗಂಭೀರ ಸ್ವರೂಪದ ಕಾಯಿಲೆಗಳು ಒಕ್ಕರಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಅಮೇರಿಕಾದ ಕ್ಯಾನ್ಸರ್ ಸೊಸೈಟಿ ನೀಡಿರುವ ವರದಿಯ ಪ್ರಕಾರ, 30 ವರ್ಷ ವಯಸ್ಸಿನ ನಂತರ