ತಂಪು ಪಾನೀಯಗಳನ್ನು ಸೇವಿಸಲು ಕಾರಣಗಳೇ ಬೇಕೆಂದೇನಿಲ್ಲ. ಅದರಲ್ಲಿಯೂ ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ನಾವು ತಂಪು ಪಾನೀಯಗಳ ಮೊರೆ ಹೋಗುತ್ತೇವೆ. ಆದರೆ ದೇಹಕ್ಕೆ ನೈಸರ್ಗಿಕವಾದ ಪಾನೀಯಗಳಾದ ಎಳನೀರು, ಲಿಂಬು ಶರಬತ್, ಕಬ್ಬಿನ ಹಾಲು ಇವೆಲ್ಲ ದಣಿದ ದೇಹಕ್ಕೆ ಶಕ್ತಿ ನೀಡುತ್ತದೆ. ಕಬ್ಬಿನ ಹಾಲು ಉಷ್ಣ ಸ್ವಭಾವದ್ದಾದರೂ ಬೇಸಿಗೆ ಕಾಲದಲ್ಲಷ್ಟೇ ಅಲ್ಲದೇ ಉಳಿದ ದಿನಗಳಲ್ಲಿ ಇದನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಬಹಳ ಪ್ರಯೋಜನಗಳಿವೆ. * ದೇಹಕ್ಕೆ ಅತಿ ಉಷ್ಣವಾದಾಗ ತಾಜಾತನದ ಆ ಹಾಲಿನ ಸೇವನೆಯಿಂದಾಗಿ