ದೊಡ್ಡವರಿಗೆ ಬರುತ್ತಿದ್ದ ಹೃದಯ ಕಾಯಿಲೆಗಳು ಇದೀಗ ಯುವ ಜನಾಂಗಕ್ಕೂ ಬರಲು ಪ್ರಾರಂಭಿಸಿವೆ. ಆರೋಗ್ಯದ ಬಗ್ಗೆ ಪ್ರತಿ ಕ್ಷಣದಲ್ಲೂ ಕಾಳಜಿ ವಹಿಸುವ ಪರಿಸ್ಥಿತಿ ಎದುರಾಗಿದೆ. ಹೃದಯ ಕಾಯಿಲೆ, ಪಾರ್ಶ್ವವಾಯು ಕಾಯಿಲೆಗಳು ತಡೆಗಟ್ಟಲು ಅಥವಾ ಬರದಂತೆ ನೋಡಿಕೊಳ್ಳಲು ಹಲವು ಅಭ್ಯಾಸಗಳನ್ನು ನೀವೂ ರೂಢಿಸಿಕೊಳ್ಳಬೇಕು. ಅವುಗಳಲ್ಲಿ ಮುಖ್ಯವಾದವುಗಳು ಈ ಕೆಳಗಿನಂತಿವೆ. ಮೆಡಿಸಿನ್ ಹೃದಯ ಕಾಯಿಲೆಗಳು ಬಾರದಂತೆ ನೋಡಿಕೊಳ್ಳಲು ಸಮಯಕ್ಕೆ ತಕ್ಕಂತೆ ಚಿಕಿತ್ಸೆ ತೆಗೆದುಕೊಳ್ಳುವುದು ಉತ್ತಮ. ನಿರಂತರ ತಪ್ಪದೇ ಮಾಡಿಕೊಳ್ಳುವ ಚಿಕಿತ್ಸೆ ಕಾಯಿಲೆಗಳನ್ನು ತಡೆಗಟ್ಟಬಲ್ಲದ್ದು.