ಬೆಂಗಳೂರು: ಗಂಡ ಅಥವಾ ಹೆಂಡತಿ ಯಾರಿಗೇ ಆದರೂ ಲೈಂಗಿಕ ನಿರಾಸಕ್ತಿಯಿದ್ದಲ್ಲಿ ದಾಂಪತ್ಯ ಜೀವನದಲ್ಲಿ ಖುಷಿಯಿರದು. ಹೀಗಾಗಿ ಲೈಂಗಿಕ ನಿರಾಸಕ್ತಿಯಿರುವ ಸಂಗಾತಿಯ ಸಹಾಯಕ್ಕೆ ಮುಂದಾಗಬೇಕು. ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ತೋರದ ಸಂಗಾತಿಯನ್ನು ದೂರುವ ಬದಲು ಆತ/ಆಕೆಯೊಂದಿಗೆ ಮಾತನಾಡಿ ಈ ಕುರಿತು ಚರ್ಚಿಸಬೇಕು. ನಿಮ್ಮ ಮಿಲನದ ಸಂತೋಷ ಹೆಚ್ಚು ಮಾಡಲು ಏನೆಲ್ಲಾ ಮಾಡಬಹುದು ಅದನ್ನೆಲ್ಲಾ ಮಾಡಲು ಇಬ್ಬರೂ ಸಹಮತಕ್ಕೆ ಬರಬೇಕು.ಅದೂ ಅಲ್ಲದೆ, ಇಬ್ಬರೂ ಜತೆಯಾಗಿ ಬೆಳಗ್ಗೆ ಅಥವಾ ಸಂಜೆ ವಾಕಿಂಗ್ ಹೋಗುವುದು, ಆಟವಾಡುವುದು,