ಬೆಂಗಳೂರು: ನಿದ್ದೆ ಕಡಿಮೆಯಾದರೂ ಹಾಗು ಹೆಚ್ಚಾದರೂ ಎಲ್ಲರಿಗೂ ತೊಂದರೆಯಾಗುತ್ತದೆ, ಅದರಲೂ ಹುಡುಗರಿಗಂತು ಈ ವಿಷಯದಲ್ಲಿ ಎಚ್ಚರವಾಗಿರಬೇಕು. ರಾತ್ರಿ ಬೇಗ ಮಲಗಿ ಬೆಳಿಗ್ಗೆ ಬೇಗ ಏಳಬೇಕು ಎಂದು ನಮ್ಮ ಹಿರಿಯರು ಹೇಳುವುದು ಈಗ ನಿಜವಾಗಿದೆ. ಇತ್ತಿಚಿಗೆ ನಿದ್ರೆಗೆ ಸಂಬಂಧಿಸಿದಂತೆ ಹೊಸ ವಿಷಯ ತಿಳಿದಿಬಂದಿದೆ. ನಿದ್ದೆ ಕಡಿಮೆಯಾದರೂ, ಜಾಸ್ತಿಯಾದರೂ ಪುರುಷರಲ್ಲಿನ ವೀರ್ಯಾಣು ಗುಣಮಟ್ಟ ಕುಸಿಯುತ್ತದೆ ಎಂದು ಸಂಶೋಧಕರು ಪರಿಶೀಲಿಸಿ ಹೇಳಿದ್ದಾರೆ. ಸಂಶೋಧಕರು ನಿದ್ದೆಯ ಆಧಾರದ ಮೇಲೆ ಪುರುಷರ ವೀರ್ಯಕಣಗಳ ಸಂಖ್ಯೆ, ಆಕಾರ, ಚಲನೆಯನ್ನು