ನಮ್ಮ ಕೂದಲನ್ನು ತೇವಯುತಗೊಳಿಸಲು ಇರುವ ಪ್ರಾಥಮಿಕ ವಿಧಾನ ಅಂದ್ರೆ, ಎಣ್ಣೆ ಹಚ್ಚುವುದು. ಆದರೆ, ಕೆಲವು ಎಣ್ಣೆಗಳು ನೆತ್ತಿಯ ರಂಧ್ರಗಳನ್ನು ನಿರ್ಬಂಧಿಸಿ, ಪರೋಕ್ಷವಾಗಿ ಕೂದಲು ಉದುರುವಿಕೆ, ತಲೆಹೊಟ್ಟು ಮೊದಲಾದ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ. ಜೊತೆಗೆ ಆ ಎಣ್ಣೆಯನ್ನು ತೆಗೆಯಲು, ಶಾಂಪೂ ಬಳಸಲೇಬೇಕು. ಈ ರಾಸಾಯನಿಕಯುಕ್ತ ಶಾಂಪೂ ಕೂದಲಿನ ಶುಷ್ಕತೆಗೆ ಕಾರಣವಾಗುವುದರಲ್ಲಿ ಎರಡು ಮಾತಿಲ್ಲ. ಇದೇ ಕಾರಣಕ್ಕೆ ಹೆಚ್ಚಿನವರು ಎಣ್ಣೆ ಹಚ್ಚಲು ಹಿಂಜರಿಯುವುದು. ಆದ್ದರಿಂದ ನೀವೇನಾದರೂ ಎಣ್ಣೆ ಬಳಸದೇ, ನಿಮ್ಮ ಕೂದಲನ್ನು ತೇವಗೊಳಿಸಬೇಕೆಂದು