ಹುಳಕಡ್ಡಿ ಹಾಗೂ ಅದರಿಂದಾದ ಕಲೆ ವಾಸಿಯಾಗಲು ಇಲ್ಲಿದೆ ಮನೆಮದ್ದು

ಬೆಂಗಳೂರು| pavithra| Last Modified ಮಂಗಳವಾರ, 4 ಡಿಸೆಂಬರ್ 2018 (10:16 IST)
ಬೆಂಗಳೂರು : (ಹುಳಕಡ್ಡಿ) ಇದು ಕೆಲವರಿಗೆ ಕೈಯಲ್ಲಿ, ಕತ್ತಿಗೆಯಲ್ಲಿ ಹಾಗೇ ದೇಹದ ಹಲವು ಕಡೆ ಕಾಣಿಸುತ್ತದೆ. ಇದನ್ನು ಪ್ರಾರಂಭದಲ್ಲೇ ವಾಸಿಮಾಡಿಕೊಳ್ಳಬೇಕು. ಇಲ್ಲವಾದರೆ ಇದು ಒಂದು ಕಡೆಯಿಂದ ಇನ್ನೊಂದು ಕಡೆಗೆ ಬೇಗ ಹರಡುತ್ತದೆ. ಇದನ್ನು ಕಡಿಮೆ ಮಾಡಿಕೊಳ್ಳಲು ಮನೆಮದ್ದು ಇಲ್ಲದೆ ನೋಡಿ.

ಈ ಹುಳಕಡ್ಡಿ ಸ್ವಲ್ಪವಾಗಿದ್ದರೆ ಅದಕ್ಕೆ ಬೆಳ್ಳುಳ್ಳಿ ರಸವನ್ನು ಹತ್ತಿಯಿಂದ ಅದರ ಮೇಲೆ ಹಚ್ಚಬೇಕು. ½ ಗಂಟೆ ಬಿಟ್ಟು ಉಗುರುಬೆಚ್ಚಗಿನ ನೀರಲ್ಲಿ ತೊಳೆಯಿರಿ. ಇದನ್ನು ದಿನಕ್ಕೆ 4-5 ಬಾರಿ ಮಾಡಿದರೆ ಬೇಗ ಹುಳಕಡ್ಡಿ ವಾಸಿಯಾಗುತ್ತದೆ. ಅದೇರೀತಿ ಅದಕ್ಕೆ ಅರಶೀನವನ್ನು ಕೂಡ ಹಚ್ಚಬಹುದು.


ಹುಳಕಡ್ಡಿ ತುಂಬಾ ಜಾಸ್ತಿಯಾಗಿದ್ದರೆ ಅದಕ್ಕೆ ಬೇವಿನ ಸೋಪ್ಪಿನ ಪೇಸ್ಟ್ 1 ಸ್ಪೂನ್, 1 ಸ್ಪೂನ್, ತುಳಸಿ ಪೇಸ್ಟ್ 1 ಸ್ಪೂನ್ ತೆಗೆದುಕೊಂಡು ಮಿಕ್ಸ್ ಮಾಡಿ ಹುಳಕಡ್ಡಿಗೆ ಹಚ್ಚಿ. ½ ಗಂಟೆ ಬಿಟ್ಟು ಉಗುರುಬೆಚ್ಚಗಿನ ನೀರಲ್ಲಿ ತೊಳೆಯಿರಿ. ಇದನ್ನು ದಿನಕ್ಕೆ 3-4 ಬಾರಿ ಮಾಡಿದರೆ ಬೇಗ ಹುಳಕಡ್ಡಿ ವಾಸಿಯಾಗುತ್ತದಲ್ಲದೇ ಅದರ ಕಲೆ ಕೂಡ ಇರುವುದಿಲ್ಲ.ಒಂದು ವೇಳೆ ಹುಳಕಡ್ಡಿ ವಾಸಿಯಾಗಿ ಅದರ ಕಲೆ ಹಾಗೇ ಒಳಿದರೆ ಅದಕ್ಕೆ ಕೊಬ್ಬರಿ ಎಣ್ಣೆ 1ಟೇಬಲ್ ಸ್ಪೂನ್ ಹಾಗೂ 1ಟೀ ಸ್ಪೂನ್ ಕರ್ಪೂರ ಎರಡನ್ನು ಚೆನ್ನಾಗಿ ಮಿಕ್ಸ್ ಮಾಡಿ ಹುಳಕಡ್ಡಿ ಕಲೆಯಾದ ಜಾಗದಲ್ಲಿ ಹಚ್ಚಿ ½ ಗಂಟೆ ಬಿಟ್ಟು ಉಗುರುಬೆಚ್ಚಗಿನ ನೀರಲ್ಲಿ ತೊಳೆಯಿರಿ. ಇದನ್ನು ದಿನಕ್ಕೆ 3-4 ಬಾರಿ ಮಾಡಿದರೆ ಕಲೆ ಇರುವುದಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್
ಇದರಲ್ಲಿ ಇನ್ನಷ್ಟು ಓದಿ :