ಬೆಂಗಳೂರು : ಅಸ್ತಮಾ ಉಸಿರಾಟಕ್ಕೆ ಸಂಬಂಧಿಸಿದ ಒಂದು ಸಮಸ್ಯೆಯಾಗಿದೆ. ಅಸ್ತಮಾ ಇರುವವರಿಗೆ ತುಂಬಾ ಆಯಾಸ, ಸುಸ್ತು, ಉಸಿರಾಟದ ತೊಂದರೆ, ಮಾತನಾಡುವಾಗ ಉಬ್ಬಸ ಬರುವುದು ಈ ತರಹದ ಸಮಸ್ಯೆಗಳು ಕಾಡುತ್ತಿರುತ್ತದೆ. ಇದು ದೊಡ್ಡವರಿಗೆ ಮಾತ್ರವಲ್ಲ ಚಿಕ್ಕವರಲ್ಲೂ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದನ್ನು ಮನೆಮದ್ದಿನಿಂದ ಕಡಿಮೆಮಾಡಬಹುದು. ಈ ಮನೆಮದ್ದನ್ನು ಸರಿಯಾಗಿ ಪ್ರತಿದಿನ ತೆಗೆದುಕೊಳ್ಳುವುದರಿಂದ ಅಸ್ತಮಾದಿಂದ ಪಾರಾಗಬಹುದು.