ಬೆಂಗಳೂರು : ಹೆಚ್ಚಿನವರಿಗೆ ಕೈಕಾಲು ಜುಮ್ಮೆನಿಸುವಿಕೆ(ಮರಗಟ್ಟುವಿಕೆ) ಕಂಡುಬರುತ್ತದೆ. ಇದಕ್ಕೆ ಮುಖ್ಯ ಕಾರಣ ರಕ್ತ ಕಡಿಮೆಯಾದಾಗ , ದೇಹದಲ್ಲಿ ಸರಿಯಾಗಿ ರಕ್ತ ಸಂಚಾರ ಆಗದೆ ಇದ್ದಾಗ ಈ ರೀತಿ ಕೈಕಾಲುಗಳು ಮರಗಟ್ಟುತ್ತದೆ. ಇದನ್ನು ಮನೆಮದ್ದಿನಿಂದ ನಿವಾರಿಸಬಹುದು. 100 ಗ್ರಾಂ ಓಂಕಾಳನ್ನು ತೆಗೆದುಕೊಂಡು ನೀರು ಹಾಕಿ ಪೇಸ್ಟ್ ಮಾಡಿಕೊಳ್ಳಿ. ಇದಕ್ಕೆ ಶುದ್ಧ ಹಸುವಿನ ತುಪ್ಪ 50 ಗ್ರಾಂ ಸೇರಿಸಿ ಮಿಕ್ಸ್ ಮಾಡಿ ಗ್ಯಾಸ್ ಮೇಲಿಟ್ಟು ಕುದಿಸಿ. ಅದರಲ್ಲಿರುವ ನೀರಿನ ಅಂಶ ಹೋಗುವವರೆಗೂ ಕುದಿಸಿ.