ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಬಾಳೆಯನ್ನು ಸಹಜವಾಗಿ ಹಣ್ಣು ಮಾಡದೆ, ರಾಸಾಯನಿಕಗಳ ಮೂಲಕ ಮಾಗುವಂತೆ ಮಾಡಲಾಗುತ್ತದೆ. ಹೀಗೆ ಹಣ್ಣಾಗುವ ಬಾಳೆ, ಒಂದೆರೆಡು ದಿನಗಳಲ್ಲೇ ಕೊಳೆಯುತ್ತದೆ. ಹೀಗೆ ಹಾಳಾಗುವುದನ್ನು ತಡೆಗಟ್ಟಲು ಇಲ್ಲಿವೆ ಸುಲಭ ಉಪಾಯಗಳು. ಅನೇಕ ತಂತ್ರಗಳ ಮೂಲಕ ಬಾಳೆಹಣ್ಣನ್ನು ದೀರ್ಘಕಾಲದವರೆಗೆ ಹಾಳಾಗದಂತೆ ಇಡಬಹುದು. ಪ್ಲಾಸ್ಟಿಕ್ ಕವರ್ನಿಂದ ಬಾಳೆ ಗೊನೆಯ ಕಾಂಡವನ್ನು ಕಟ್ಟಿಟ್ಟರೆ ಬಾಳೆಹಣ್ಣು ಬೇಗನೆ ಹಾಳಾಗುವುದಿಲ್ಲ. ಅಲ್ಲದೆ ಬಾಳೆಹಣ್ಣನ್ನು ನೇತು ಹಾಕುವುದರಿಂದ ಸಹ ಕೊಳೆಯದಂತೆ ದೀರ್ಘಕಾಲ ಇಡಬಹುದು. ಬಾಳೆಹಣ್ಣು ಕೆಡದಂತೆ