ಬೆಂಗಳೂರು: ಹಳ್ಳಿ ಪ್ರದೇಶಗಳಲ್ಲಿ ಜನರು ತಮ್ಮ ಹೊಲದಲ್ಲಿ ಬೆಳೆದ ಭತ್ತವನ್ನು ಅಕ್ಕಿ ಮಾಡಿ ಅದನ್ನು ಒಂದು ವರ್ಷದವರೆಗೂ ಉಪಯೋಗಿಸುತ್ತಾರೆ. ಹೀಗೆ ವರ್ಷಗಟ್ಟಲೆ ಅಕ್ಕಿಯನ್ನು ಶೇಖರಿಸಿ ಇಡುವುದರಿಂದ ಅದರಲ್ಲಿ ಹುಳಗಳು ಹುಟ್ಟುತ್ತವೆ. ಇದರಿಂದಾಗಿ ಅಕ್ಕಿ ಹಾಳಾಗಿ ಉಪಯೋಗಿಸಲು ಆಗುವುದಿಲ್ಲ. ಅಕ್ಕಿಯಲ್ಲಿ ಹುಳ ಆಗದಂತೆ ವರ್ಷಗಟ್ಟಲೆ ಸಂಗ್ರಹಿಸಿ ಇಡಬಹುದು. ಹೇಗೆಂದರೆ ಕಹಿಬೇವಿನ ಸೊಪ್ಪನ್ನು ಬಿಸಿಲಿನಲ್ಲಿ ಒಣಗಿಸಿ ನಂತರ ಅದನ್ನು ಪುಡಿಮಾಡಿ ,1 ಕಪ್ ನಷ್ಟು ಪುಡಿಯನ್ನು ತೆಗೆದುಕೊಂಡು ಅದಕ್ಕೆ ಬೆಳ್ಳುಳ್ಳಿ ಸಿಪ್ಪೆಯ ಪುಡಿ