ಬೆಂಗಳೂರು: ಸಾಮಾನ್ಯವಾಗಿ ದಾಸವಾಳ ಹೂವಿನ ಬಗ್ಗೆ ನಮಗೆ ಅಸಡ್ಡೆಯಿದೆ. ಇದನ್ನು ಮುಡಿದುಕೊಳ್ಳಲು ಹೆಣ್ಣು ಮಕ್ಕಳು ಇಷ್ಟಪಡುವುದಿಲ್ಲ. ಕೇವಲ ಪೂಜೆಗೆ ಬಳಕೆಯಾಗುವ ಹೂವೆಂದುಕೊಂಡಿದ್ದೇವೆ. ಆದರೆ ಹೆಚ್ಚಿನ ಆಯುರ್ವೇದ ಔಷಧಿಗಳಲ್ಲಿ ದಾಸವಾಳ ಹೂವಿನ ಬಳಕೆ ಹೆಚ್ಚು. ಕಾರಣ, ಇದರಲ್ಲಿ ಸಾಕಷ್ಟು ಉಪಯುಕ್ತ ಅಂಶಗಳಿವೆ.ದಾಸವಾಳ ತಂಪು ಎನ್ನುವ ಕಾರಣಕ್ಕೆ ಹಿಂದಿನ ಕಾಲದಲ್ಲಿ ಇದರ ಕಾಂಡದ ಸಿಪ್ಪೆಯನ್ನು ನೀರಿನಲ್ಲಿ ನೆನೆ ಹಾಕಿ ತಲೆ ಸ್ನಾನ ಮಾಡುವಾಗ ಬಳಸುತ್ತಿದ್ದರು. ಇನ್ನೂ ಅನೇಕ ಕಾರಣಕ್ಕೆ ಮನೆ ಔಷಧವಾಗಿ ಇದನ್ನು