ಬೆಂಗಳೂರು: ನಿಮ್ಮ ಕೆಲಸದಲ್ಲಿ ಒತ್ತಡವಿದೆಯೇ? ಬಾಸ್ ತೊಂದರೆ ಕೊಡುತ್ತಿದ್ದಾರೆಯೇ? ಖುಷಿ ಪಡಿ! ಕೆಲಸದಲ್ಲಿರುವ ಒತ್ತಡ ನಮ್ಮ ದೈನಂದಿನ ಜೀವನದಲ್ಲಿ ಬರುವ ತೊಂದರೆಗಳನ್ನು ಎದುರಿಸಲು ಮನಸ್ಸು ಗಟ್ಟಿಗೊಳಿಸುತ್ತದಂತೆ.ಹೀಗೊಂದು ಇಂಡಿಯಾನಾ ಬ್ಯುಸಿನೆಸ್ ಸ್ಕೂಲ್ ಯೂನಿವರ್ಸಿಟಿ ನಡೆಸಿದ ಸಂಶೋಧನೆಯೊಂದು ಈ ವಿಷಯವನ್ನು ಬಹಿರಂಗಪಡಿಸಿದೆ. ಕೆಲಸದಲ್ಲಿ ಒತ್ತಡವಿದ್ದರೆ, ಅದನ್ನು ಪರಿಹರಿಸಲು ಹಲವು ದಾರಿಗಳನ್ನು ಕಂಡುಕೊಳ್ಳುವ ಕಲೆ ಕಲಿತುಕೊಳ್ಳುತ್ತೇವೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.ಸುಮಾರು 10,000 ಮಂದಿಯ ಮೇಲೆ ಸಂಶೋಧಕರು ತಮ್ಮ ಪ್ರಯೋಗ ನಡೆಸಿದ್ದಾರೆ. ಅವರ ಬಳಿ ಹೇಗೆ