ನೆಗಡಿ, ಕಫ, ಕೆಮ್ಮು, ಜ್ವರ ಇವುಗಳು ಸಾಮಾನ್ಯವಾದ ಕಾಯಿಲೆಗಳು. ಇವಕ್ಕೆಲ್ಲಾ ತಕ್ಷಣವೇ ಆಸ್ಪತ್ರಗೆ ಹೋಗಿ ಸಮಯ ಮತ್ತು ಹಣವನ್ನು ಪೋಲು ಮಾಡುವ ಬದಲು ಮನೆಯಲ್ಲಿ ನಾವೇ ಹಲವಾರು ಔಷಧಗಳನ್ನು ಮಾಡಿಕೊಳ್ಳಬಹುದು. ಇದಕ್ಕಾಗಿ ನೀವು ವಸ್ತುಗಳನ್ನು ಹೊರಗೆಲ್ಲೂ ಹುಡುಕಾಡುವ ಅಗತ್ಯವೇ ಇಲ್ಲ. ನಿಮ್ಮ ಅಡುಗೆ ಮನೆಯಲ್ಲಿಯೇ ನಿಮ್ಮ ಕಾಯಿಲೆಗಳಿಗೆ ಔಷಧಗಳು ದೊರಕುತ್ತವೆ. ನಮಗೇ ತಿಳಿಯದೇ ನಾವು ದಿನನಿತ್ಯವೂ ಅಡುಗೆಯಲ್ಲಿ ಇವುಗಳನ್ನು ಬಳಸುತ್ತಿರುತ್ತೇವೆ. ಯಾವೆಲ್ಲಾ ವಸ್ತುಗಳು ಈ ಮೇಲಿನ ಕಾಯಿಲೆಗಳನ್ನು ಗುಣಪಡಿಸುತ್ತದೆ ನೋಡೋಣ..