ಬೆಂಗಳೂರು : ಮೈಗ್ರೇನ್ ಎನ್ನುವುದು ತಲೆನೋವಿನ ಒಂದು ಪ್ರಕಾರ. ಈ ತಲೆನೋವು ಇರುವವರು ದೈಹಿಕವಾಗಿ, ಮಾನಸಿಕವಾಗಿ ಆಯಾಸವಾದಾಗ ಅವರಲ್ಲಿ ಈ ತಲೆನೋವು ಕಂಡುಬರುತ್ತೆ. ಹಾಗೆಂದು ಎಲ್ಲಾ ತಲೆನೋವು ಮೈಗ್ರೇನ್ ಅಲ್ಲ. ನೆಗಡಿ, ಜ್ವರ ಇತ್ಯಾದಿ ಕಾರಣಗಳಿಂದಲೂ ತಲೆನೋವು ಬರುತ್ತದೆ. ಒಬ್ಬ ವ್ಯಕ್ತಿಯ ತಲೆಯೊಳಗಿನ ರಕ್ತನಾಳಗಳ ಗಾತ್ರದಲ್ಲಿ ಅಸ್ಥಿರತೆಯುಂಟಾಗಿ, ಅವು ಮೊದಲು ಸಂಕುಚಿತವಾಗಿ ನಂತರ ವಿಕಸಿತವಾಗುತ್ತದೆ. ಆಗ ರಕ್ತನಾಳಗಳಿಗೆ ಸಂಬಂಧಿಸಿದ ಸೂಕ್ಷ್ಮ ನರಗಳು ಉದ್ರೇಕಗೊಂಡು ತಲೆಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ ಅದೇ ಮೈಗ್ರೇನ್.